"ಕೆಂಪು ರಾಟವಾಳ", "ಕೆಂಪು ಮುನಿಯ" ಅಥವಾ "ಸ್ಟ್ರಾಬೇರಿ ಪಿ೦ಚ್" (ಅಮಾಂಡವ ಅಮಾಂಡವ) ಎಂಬುದು ಈ ಹಕ್ಕಿಯ ವೈಜ್ಞಾನಿಕ ಹೆಸರು. ಇದು ಗುಬ್ಬಚ್ಚಿ ಗಾತ್ರದ ಹಕ್ಕಿಯ ಎಸ್ಟ್ರಿಲ್ಡಿಡೇ ಕುಟುಂಬಕ್ಕೆ ಸೇರಿದೆ. ಏಷ್ಯಾದ ಉಷ್ಣವಲಯ ಪ್ರದೇಶದ ಕುರುಚಲು, ಹುಲ್ಲುಗಾವಲು ಪ್ರದೇಶಗಳಲ್ಲಿ ಕಂಡು ಬರುತ್ತದೆ. ಮತ್ತು ಗಂಡು ಹಕ್ಕಿಗಳು ಪಂಜರದಲ್ಲಿ ಸಾಕಲು ಯೋಗ್ಯವಾಗಿದ್ದು , ಸಂತಾನ ಕಾಲದಲ್ಲಿ ವರ್ಣಮಯ ಪುಕ್ಕಗಳ್ಳುಳ್ಳ ಸು೦ದರ ಹಕ್ಕಿ. ಇವುಗಳು ಭಾರತದ ಉಪಖಂಡದ ಪ್ರದೇಶದಲ್ಲಿ ಮಾನ್ಸೂನ್ ಕಾಲದಲ್ಲಿ ಸಂತಾನಕ್ಕೆ ಸಜ್ಜುಗೊಳ್ಳುತ್ತವೆ. ಇದರ ವರ್ಗದ ಹೆಸರು "ಅಮಾಂಡವ" ಮತ್ತು ಇದರ ಸಾಮಾನ್ಯ ಹೆಸರು "ಅವಡವತ್" ()ಎಂಬುದು, ಗುಜರಾತಿನ ಅಹ್ಮಾದಾಬಾದ್ ನಗರದಲ್ಲಿ ಸಂಶೋಧಿಸಲಾಯಿತು. ಈ ಹಕ್ಕಿಗಳನ್ನು ಸಾಕಲು ಮುದ್ದಾಗಿರುವುದರಿಂದ ಹಲವೆಡೆ ಇವುಗಳ ಮಾರಾಟವು ಸಹ ನಡೆಯುತ್ತದೆ. == ವಿವರ == ಈ ಕೆಂಪು ರಾಟವಾಳ ಹಕ್ಕಿಯು ತುಂಬ ಸಣ್ಣ ಪಕ್ಷಿ, ಈ ಹಕ್ಕಿಯನ್ನು ಗುರುತಿಸಲು ಅದರ ಬಾಲದ ಸುತ್ತ ಇರುವ ಕಪ್ಪು ಬಣ್ಣ ಮತ್ತು ಕೆಂಪು ಕೊಕ್ಕಿನಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಬಾಲದ ಕೆಳಗೆ ಕೆಂಪು ಮತ್ತು ಸಾಮಾನ್ಯವಾಗಿ ಗಂಡು ಹಕ್ಕಿ ಸಂತಾನಾಭಿವೃದ್ಧಿ ಕಾಲದಲ್ಲಿ ಮೈ ಮೇಲೆಲ್ಲ ಕೆಂಪಾಗಿರುತ್ತದೆ. ಕಣ್ಣು ಮಧ್ಯದಲ್ಲಿ, ಹೊಟ್ಟೆಯ ಕೆಳಗೆ ಮತ್ತು ರೆಕ್ಕೆಗಳು ಕಪ್ಪಗಿದೆ. ಕೆಂಪು ದೇಹ ಮತ್ತು ರೆಕ್ಕೆಯ ಪುಕ್ಕಗಳ ಮೇಲೆ ಬಿಳಿಯ ಚುಕ್ಕಿಗಳು ಇರುತ್ತವೆ. ಸಂತಾನಾಭಿವೃದ್ಧಿಯಿಲ್ಲದ ಕಾಲದಲ್ಲಿ ಗಂಡು ಹಕ್ಕಿಯು ಸ್ವಲ್ಪ ಮಂಕುಬಣ್ಣದಿಂದ ಕೂಡಿರುತ್ತದೆ. ಆದರೆ ಬಾಲದ ಕೆಳಗೆ ಕೆಂಪಗಿರುತ್ತದೆ. ಹೆಣ್ಣು ಹಕ್ಕಿಯು ಯಾವಾಗಲೂ ಮಂಕುಬಣ್ಣವಾಗಿದ್ದು, ರೆಕ್ಕೆಯ ಗರಿಗಳ ಮೇಲೆ ಬಿಳಿಯ ಚುಕ್ಕಿಗಳು ಸ್ವಲ್ಪ ಅಸ್ಪಷ್ಟವಾಗಿ ಕಾಣುತ್ತದೆ. == ವಿಕಾಸ ಮತ್ತು ವ್ಯವಸ್ಥೆ == ಜೀನ್ ಡೆಲಕೋರ್ ( ) ರವರ ಪ್ರಕಾರ ಮೊದಲು ಕೆಂಪು ಅವಡವಟ್ ಗಳು ಕೂಡ "ಎಸ್ಟ್ರಿಲ್ಡ" ಪ್ರಭೇದಕ್ಕೆ ಸೇರಿದ್ದವು, ಆದರೆ ಇವುಗಳ ಒಳರಚನೆ, ನಡವಳಿಕೆ ಮತ್ತು ಜೀವರಾಸಯನ ಮತ್ತು ಡಿ ಎನ್ ಎ ಅಧ್ಯಾಯನದಿಂದ ಈಗ "ಅಮಾಂಡವ" ಪ್ರಭೇದಕ್ಕೆ ಸೇರಿಸಲಾಗಿದೆ. ಈ ಎಸ್ಟ್ರಿಲ್ಡಿನೆ ಪ್ರಭೇದ ಭಾರತ ಭೂಖಂಡದಲ್ಲಿ ವಿಕಸನಗೊಂಡವೆಂದು ತಿಳಿಯಲಾಗಿದೆ. ನಂತರ ಅಫ್ರಿಕಾ ಮತ್ತು ಪೆಸಿಫಿಕ್ ಪ್ರಾಂತ್ಯಗಳಿಗೆ ವಲಸೆ ಹೋದವೆಂದು ತಿಳಿಯಲಾಗಿದೆ. 9 ಹಿಂದೆ ಕೆಂಪು ಮುನಿಯಗಳು ಹಸಿರು ಮುನಿಯಗಳಿಂದ ಮಾರ್ಪಟ್ಟಿವೆ. == ಆವಾಸ ಮತ್ತು ಹಂಚಿಕೆ == ಕೆಂಪು ರಾಟವಾಳಗಳು ಮುಖ್ಯವಾಗಿ ಮೈದಾನ ಪ್ರದೇಶಗಳು, ಎತ್ತರವಾಗಿ ಬೆಳೆದಿರುವ ಹುಲ್ಲುಗಾವಲು ಪ್ರದೇಶಗಳು ಮತ್ತು ಹಲವು ಬಾರಿ ನೀರಿನ ಬಳಿ ಬೆಳೆಯುವ ಕೃಷಿ ಜಾಗಗಳಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ನಾಲ್ಕು ಜಾತಿಯ ಹಕ್ಕಿಗಳಿದ್ದು. ಅದರ ಉಪಜಾತಿಗಳನ್ನು ಬಾಂಗ್ಲದೇಶ, ಭಾರತ, ಶ್ರೀಲಂಕ, ನೇಪಾಳ ಮತ್ತು ಪಾಕೀಸ್ತಾನಗಳಲ್ಲಿ ಸೂಚಿಸಲಾಗಿದೆ; ಬರ್ಮಾಕ್ಕೆ ಸಂಬಂಧಿಸಿದ ಹಾಗೆ "ಫ್ಲಾವಿಡಿವೆಂಟ್ರಿಸ್" ಎಂತಲೂ. ಹಾಗೆಯೇ ಚೀನಾದ ಕೆಲ ಭಾಗ, ಇಂಡೋನೆಷಿಯ, ಥೈಲ್ಯಾಂಡ್ ಮತ್ತು ವಿಯಾಟ್ನಂ)ನಲ್ಲು ಕರೆಯುವರು;ಜಾವದ ಪೂರ್ವದ ಜನಗಳು ಎಂತಲೂ ಮತ್ತು ಕಾಂಬೊಡಿಯಾದಲ್ಲಿ ಎಂತಲೂ ಕರೆಯುತ್ತಾರೆ. ದಕ್ಷಿಣ ಸ್ಪೈನ್ ನಲ್ಲಿ ಇವುಗಳ ಸಾಂದ್ರತೆ ಕಾಣಸಿಗುತ್ತವೆ , , ಈಜಿಪ್ಟ್ಮಲೇಶಿಯಾ,ಪೋರ್ಚ್ ಗಲ್, ಪೂರ್ಟೋ ರಿಕೋ,ಸಿಂಗಪೂರ್ ಮತ್ತು ಹವೈ == ವರ್ತನೆ ಮತ್ತು ಪರಿಸರ == ಸಾಮಾನ್ಯವಾಗಿ ಈ ಸಣ್ಣ ಜಾತಿಯ ಹಕ್ಕಿಗಳು ಸಣ್ಣಸಣ್ಣ ಗುಂಪುಗಳಲ್ಲಿರುತ್ತವೆ. ವೇಗವಾಗಿ ರೆಕ್ಕೆ ಬಡಿದುಹಾರುವುದರಿಂದ ಮತ್ತು ಹಸಿರು ಪೊದೆಗಳಲ್ಲಿ ಇರುವುದರಿಂದ ಇವುಗಳು ಕಾಣಸಿಗುವುದು ತುಂಬ ವಿರಳ. ಸಂತಾನೋತ್ಪತಿ ಸಮಯದಲ್ಲಿ ಜೊತೆ ಜೊತೆಯಾಗಿ ಈ ಹಕ್ಕಿಗಳಿರುತ್ತವೆ, ಈ ಹಕ್ಕಿಗಳು ಹಾರಿದ ನಂತರ ವಿಭಿನ್ನ ರೀತಿಯ ಸಣ್ಣ ದನಿಯಲ್ಲಿ "ಪ್ಸೀಪ್ ಪ್ " ಎಂದು ಕೂಗುತ್ತವೆ. ಗುಂಪಿನಲ್ಲಿರುವ ಈ ಹಕ್ಕಿಗಳು ತಲೆಯ ಮೇಲಿನ ಪುಕ್ಕಗಳನ್ನು ಕದಡಿ ಒಂದು ಹಕ್ಕಿ ಮತ್ತೊಂದು ಹಕ್ಕಿಯ ರೆಕ್ಕೆಗಳನ್ನು ಸರಿಪಡಿಸಿಕೊಳ್ಳಲು ಆಹ್ವಾನಿಸುತ್ತವೆ. ಸಾಮಾನ್ಯವಾಗಿ ಕಾಳುಗಳನ್ನು ತಿಂದು ಜೀವಿಸುವ ಈ ಹಕ್ಕಿಗಳು ಗೆದ್ದಲು ಹುಳುಗಳನ್ನು ತಿನ್ನುತ್ತವೆ. ಹುಲ್ಲಿನ ಗರಿಗಳಿಂದ ವೃತ್ತಾಕಾರವಾಗಿ ತನ್ನ ಗೂಡನ್ನು ಕಟ್ಟಿಕೊಳ್ಳುತ್ತವೆ. ಸಾಮಾನ್ಯವಾಗಿ ಈ ಹಕ್ಕಿಗಳು ಸುಮಾರು 5 ರಿಂದ 6 ಬಿಳಿ ಬಣ್ಣದ ಮೊಟ್ಟೆಗಳನ್ನು ಇಡುತ್ತವೆ. ಏಪ್ರಿಲ್ ನಲ್ಲಿ ಪೂರ್ತಿ ಕಪ್ಪಾಗಿರುವ ಕೊಕ್ಕು, ಮೇ ತಿಂಗಳಲ್ಲಿ ಕೆಂಪು ಬಣ್ಣಕ್ಕೆ ತಿರುಗಿ, ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಕೊಕ್ಕಿನ ಬಣ್ಣ ಕಪ್ಪಾಗುತ್ತದೆ. ವಾತಾವರಣಕ್ಕೆ ತಕ್ಕಂತೆ ಹಕ್ಕಿಯ ಬಾಹ್ಯ ರಚನೆಯು ಏರುಪೇರಾಗುತ್ತದೆ. ಉಣ್ಣೆಯಂತಹ ಪರಾವಲಂಬಿ ಜೀವಿಗಳನ್ನು ತಿನ್ನುವ ಹಕ್ಕಿಗಳಲ್ಲಿ ಇಂಕ್ನೋಸಿರ. “ಬ್ರೂಲಿಯ ಅಮಂಡವ" ಮತ್ತು ಅಂಬ್ಲೈಸಿರ, “ಮೈರ್ಸಿಡೇ ಅಮಂಡವ " ಎಂದು ಗುರುತಿಸಲಾಗಿದೆ. ಮತ್ತು ಈ ಪಕ್ಷಿಗಳಿಂದ ತೆಗೆದ ಪರಮೈಕ್ಸೋ ವೈರಸ್ ಜಪಾನ್ ನಲ್ಲಿ ಇಡಲಾಗಿದೆ. == ಉಲ್ಲೇಖಗಳು == == ಅನ್ಯ ಮೂಲಗಳು == 2016-04-19 ವೇಬ್ಯಾಕ್ ಮೆಷಿನ್ ನಲ್ಲಿ. 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.